ನಿವೇದನೆ

ಭಾವನೆಗಳೂ ಎಂದಿಗೂ ಶಾಶ್ವತವಲ್ಲ....ಆದರೂ ಯಾವ ಭಾವಕ್ಕೆ ಸಾವಿಲ್ಲ ಅನ್ನಿಸಿತೋ ಅದನ್ನ ನಿಮ್ಮ ಮುಂದೆ ಇಟ್ಟಿದ್ದೇನೆ....ಈ ಭಾವಕ್ಕೆ ಜನಿಸಿದ ಕೂಸುಗಳೆಲ್ಲವೂ ಸುಂದರ, ಸಧೃಡ ಎನ್ನಲಾರೆ.... ಆದರೆ ಯಾವುದೂ ಸಮಯಕ್ಕೆ ಮೊದಲೆ ಹುಟ್ಟಿದ ಅಥವಾ ಸತ್ತು ಹುಟ್ಟಿದ ಕೂಸುಗಳಲ್ಲ....

Thursday, October 15, 2009

ರೂಪಕ್ಕಿಂತ ಗುಣ ಮುಖ್ಯ ಎಂದವರ್ಯಾರು?


"ರೂಪಕ್ಕಿಂತ ಗುಣ ಮುಖ್ಯ ಕಣ್ರೀ" ಅಪರೂಪಕ್ಕಾದರೂ ಪ್ರತಿಯೊಬ್ಬರ ಬಾಯಲ್ಲಿ ಬರುವ ಡೈಲಾಗಿದು.
ಆದರೆ ನಮಗೇ ಗೊತ್ತಿಲ್ಲದ ವಿಷಯ ಅಂದರೆ 'ರೂಪ'ವೂ ಒಂದು 'ಗುಣ'ವೇ.


ಪಡೆದ ಡಿಗ್ರೀ, ದೊಡ್ಡ ಕೆಲಸ, ಅಂತಸ್ತು, ಇರುವ ಹಣ ಇವೆಲ್ಲ ಕೊಡೊ confidence ನಂತೆ ನಮ್ಮ ಸುಂದರ ರೂಪವೂ ನಮಗೆ ಗೊತ್ತಿಲ್ಲದಂತೆ ಒಂದು ದೊಡ್ಡ ಆತ್ಮವಿಶ್ವಾಸವನ್ನ ತುಂಬುತ್ತದೆ. ನಾನೆಲ್ಲಿ ಹೋದರು ಇನ್ನೊಬ್ಬರನ್ನ ಆಕರ್ಷಿಸಬಲ್ಲೆ, ಅವರನ್ನ ತನ್ನತ್ತ ಸೆಳೆದು ತನ್ನ ಕೆಲಸ ಮಾಡಿಸಿಕೊಳ್ಳಬಲ್ಲೆ ಅನ್ನೋ ವಿಶ್ವಾಸವನ್ನ ತುಂಬುವುದೇ ನಮ್ಮ ಅಂದ.


"ನೋಡೋಕೆ ಒಳ್ಳೆ ಹುಡುಗನ ಥರ ಕಾಣ್ತೀಯ" ಅಂದರೆ? ನೋಡೋಕೆ ಚೆನ್ನಾಗಿದ್ದೀಯಾ, ಮುಖದಲ್ಲಿ ಮುಗ್ಧತೆ ಕಾಣತ್ತೆ ಹಾಗಾಗಿ ನೀನು ಒಳ್ಳೆಯವನು ಅಂತ ತಾನೆ? ಹೌದು, ಸ್ನಿಗ್ಧ ಸೌ೦ದರ್ಯವೇ ಹಾಗೆ; ಆ ಕ್ಷಣದ ಮಟ್ಟಿಗಾದರೂ ಇವನು ಒಳ್ಳೆಯವ, ಓದಿದವ, ತಿಳಿದವ, ಮರ್ಯಾದಸ್ಥ ಅನ್ನೋ ಭಾವವನ್ನ ತುಂಬುತ್ತೆ.


ದುನಿಯಾ ವಿಜಯ್ ಸುಮ್ಮನೆ ಹೇಳಲಿಲ್ಲ " ಅಲಾ ಏನ್ ಜನಾ? ಕಪ್ಪಗಿದ್ದು ಹಳೆ ಬಟ್ಟೆ ಹಾಕೊಂಡ್ಬಿಟ್ರೆ ಎಲ್ಲ ಕಳ್ಳರ ಥರಾನೆ ಕಾಣ್ತೀವಲ್ಲ!!" ಅಂತ.  Bus conductorನ  ಧ್ವನಿಯನ್ನ ಗಮನಿಸಿದ್ದೀರಾ? ವಿಜಯ್ ಹೇಳಿದ ವೇಷದಲ್ಲಿ ಇದ್ದರೆ "ಏನ್ ಬಾಗ್ಲಲ್ ನಿಂತು ಸಾಯ್ತೀಯ? ಒಳಗಡೆ ಹೋಗಕ್ಕೆ ಆಗಲ್ವ?" ಅನ್ನೋನು ಉತ್ತರ ಭಾರತದ ಚೆಲುವನ ಹತ್ತಿರ "ಸರ್, ಒಳಗಡೆ ಜಾಗ ಖಾಲಿ ಇದೆ ಹೋಗಿ" ಅಂತಾನೆ. ಯಾಕೆ??


ಅದೆಲ್ಲ ಇರಲಿ. ಇಡೀ ಪ್ರಪಂಚದಲ್ಲಿ 'ಕಾಗೆ ನನಗೆ ತುಂಬಾ ಇಷ್ಟ' ಅಂತ ಅನ್ನೋ ಯಾವನಾದರೂ ಒಬ್ಬನನ್ನ ತೋರಿಸಿ ನೋಡುವ? "ಕೋಗಿಲೆಯೂ ಕಾಗೆಯಂತೆ ಕಪ್ಪೇ, 'ಕಾಕಃ ಕೃಷ್ಣಃ ಪಿಕಃ ಕೃಷ್ಣಃ  ಕೋ ಭೇಧಃ ಪಿಕ ಕಾಕಯೋ:' ಆದರೂ ಜನ ಕೋಗಿಲೆಯನ್ನು ಇಷ್ಟಪಡುವುದಿಲ್ಲವೇ?" ಎಂದೇನೂ ನೀವು ಕೇಳಬಹುದು; ಆದರೆ ಕೋಗಿಲೆಗೂ ಗೊತ್ತು, ನಮ್ಮ ಬುದ್ಧಿ. ಅದಕ್ಕೇ ಅದು ಮರದ ಮರೆಯಲ್ಲಿಯೇ ಕುಳಿತು ಕುಹೂ ಕುಹೂ ಎನ್ನುವುದು.


ಕ್ರೈಂ ಡೈರಿಯಲ್ಲಿ ರವಿ ಬೆಳಗೆರೆ "ಪ್ರಿಯ ವೀಕ್ಷಕರೆ, ನೋಡಿ...ಇಷ್ಟು ಸುಂದರ ಮುಖದ ಹುಡುಗೀನಾ ಅದ್ಯಾವ್ ಪರಿ ಕೊಚ್ಚಿ ಹಾಕಿದಾನೆ!!" ಅಂತ ಕೂಗೋವಾಗ ನಮ್ಮಮ್ಮಂದಿರು ಮರುಕ ಪಡೋದೂ ಹಾಗೇ, "ಪಾಪ, ಎಷ್ಟ್ ಚೆಂದ್ ಕೂಸಾಯ್ತ್ತು; ಪಾಪಿ ಕೊಂದ್ ಹಾಕ್ದಾ." ಅಂದರೆ ಸಾವಿನಲ್ಲೂ-ಸಾವಿಗೆ ಕಾರಣವಾದ ಹತ್ಯೆಯಲ್ಲೂ ರೂಪಕ್ಕೇ ಪ್ರಾಮುಖ್ಯತೆ.  ಅದೇ ಜಾಗದಲ್ಲಿ ಒಬ್ಬ ಪೆಚ್ಚು ಮೋರೆಯ ಬೆಪ್ಪು ಹುಡುಗ ಇದ್ದಿದ್ದರೆ ರವಿ ಬೆಳಗೆರೆಯ ಬಾಯಾಲ್ಲಾಗಲಿ, 'ಪ್ರಿಯ ವೀಕ್ಷಕ'ರ ಬಾಯಲ್ಲಾಗಲೀ ಅಂಥ ದೀರ್ಘ ಉದ್ಗಾರ ಬರಲು ಸಾಧ್ಯವೇ ಇಲ್ಲ.


"ಕನ್ನಡವನ್ನು ಸ್ಪಷ್ಟವಾಗಿ ಓದಲು ಬರಬೇಕು, ೨೦-೩೦ ವರ್ಷ ವಯಸ್ಸಿನವರಾಗಿರಬೇಕು ಮತ್ತು ನೋಡಲು ಸುಂದರವಾಗಿರಬೇಕು. ಅಂಥವರು ನಮ್ಮಲ್ಲಿ ಸುದ್ದಿ ವಾಚಕರ ಕೆಲಸಕ್ಕಾಗಿ ತಮ್ಮ ಭಾವಚಿತ್ರದೊಂದಿಗೆ ನಿಮ್ಮ ಸಂಪೂರ್ಣ bio-data ವನ್ನು  ಈ ವಿಳಾಸಕ್ಕೆ ಕಳುಹಿಸಿ" ಎಲ್ಲ ಟಿವಿ ಚಾನೆಲ್ ನವರ ಪ್ರಕಟಣೆಯೂ ಸರಿಸುಮಾರು ಇದೇ ಧಾಟಿಯಲ್ಲಿರುತ್ತದೆ. ಈಗ ಹೇಳಿ_ರೂಪ ಮುಖ್ಯವಲ್ಲ ಅನ್ನೋದಾದರೆ ಯಾಕೆ ಹೀಗೆಲ್ಲ ಹೇಳಬೇಕಿತ್ತು?


ಆದರೆ, 'ಎಂಥ ಸುಂದರ ಮಾವಿನ ಹಣ್ಣ!' ಎಂದು ಆಸೆಯಿಂದ ಕೊಯ್ದಾಗ ಒಳಗಡೆ ಹುಳವಿದ್ದರೆ ಏನು ಪ್ರಯೋಜನ, ಅಂಥ ರೂಪವಿದ್ದು? ನಮ್ಮ ಒಳಗಿನ ರೂಪ ಗೊತ್ತಾದಾಗ ಹೊರಗಿನ ರೂಪಕ್ಕೆ ಯಾವ ಬೆಲೆಯೂ ಇರಲಾರದು; ಪೈನಾಪಲ್ ನ ತಿರುಳು ಇಷ್ಟವಾದವರು ಅದರ ಹೊರಗಿನ ಮುಳ್ಳುಗಳಿಗೆ ತಲೆ ಕೆಡಿಸಿಕೊಳ್ಳಲಾರರು. ಇಲ್ಲದೇ ಹೋಗಿದ್ದಿದ್ದರೆ ಕೆದರಿದ ಕೂದಲಿನ ಐನಸ್ಟೀನ್, ಕುಬ್ಜ ಕಾಯದ ನಾರಾಯಣಮೂರ್ತಿಯಂಥವರಿಗಿಂತ ಸುಂದರ ಮುಖದ ಅಬು ಸಲೇಂನೇ ದೊಡ್ಡ ಮನುಷ್ಯ ಅನ್ನಿಸಿಕೊಳ್ಳುತ್ತಿದ್ದ.


ಮದುವೆಮನೆಗಳಿಗೆ ಹೋಗಿಬಂದವರು ಹೇಳುವುದನ್ನು ಕೇಳಿದ್ದೀರಾ? "ಮನ್ಮಥನ ಥರ ಇರೋ ಅವನಿಗೆ ಅದ್ಯಾಕೆ ಆ ಹುಡುಗಿ ಇಷ್ಟ ಆದಳಪ್ಪಾ?"   " ಮಾರಾಯ್ನೇ, ಆ ಕೂಸು love ಮಾಡಿದ್ದಂತೂ ಮಾಡ್ತು. ಆದ್ರ್ ಅವ್ನ್ ನೋಡಿರೆ ಬಾಳೆಕಾಯಿ ತಿಂಬುಲ್  ಬಪ್ಪವ್ರಾಂಗ್ ಇದ್ನಲೋ!" ನಮಗೆ ಇಷ್ಟವಾದವರು, ಪ್ರೀತಿ ಅನ್ನಿಸಿದವರು ಹೇಗಿದ್ದರೂ ಚೆಂದವೇ. ಆದರೂ ಇದೇ ಚೆಂದದ ಹಿಂದೆ ನಾವೆಲ್ಲಾ ಬಿದ್ದಿರುವುದರಿಂದಲೇ ಇಷ್ಟೊಂದು beauty parlorಗಳು. 

ಅರರೆ! ಎಲ್ಲಿಗೆ ಹೊರೆಟ್ರಿ? ನಾನು ಬ್ಯೂಟಿ ಪಾರ್ಲರ್ ನೆನಪು ಮಾಡಿದ್ದೇ ತಪ್ಪಯಿತಾ? ನಿಲ್ಲಿ, comment ಬರೆದು ಹೋಗಿ.

13 comments:

 1. tumba reality ide nimma barahadalli.

  ReplyDelete
 2. tumba reality ide nimma barahadalli.

  Bhari mast baride han...

  ReplyDelete
 3. hey..........sikkapatte satya bateyakke kaltubittidyallo................keep it up..very nice

  ReplyDelete
 4. ನಿಮ್ಮ ಮಾತು ಸತ್ಯ. ನಾವು 'ರೂಪ ಬಣ್ಣ ಮುಖ್ಯವಲ್ಲ' ಎಂದು ಆದರ್ಶದ ಮಾತು ಆಡಿದರೂ, ಎಲ್ಲರೂ ಅವಕ್ಕೆ ಪ್ರಾಮುಖ್ಯತೆ ಕೊಡುವವರೇ.

  ReplyDelete
 5. ವಿನಾಯಕ...

  ಸತ್ಯವಾದ ಮಾತು...
  ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಿರಿ...

  ರೂಪವೂ ಮುಖ್ಯ...
  ಗುಣ ಅದಕ್ಕಿಂತ ಮುಖ್ಯ.... ಏನಂತೀರಿ...?

  ಚಂದದ ಬರಹಕ್ಕೆ ಅಭಿನಂದನೆಗಳು...

  ReplyDelete
 6. ವಿನಾಯಕರೇ, ನಿಜನೋಡಿ...ಮೊನ್ನೆ ನಮಗೆ ಪರಿಚಯದವರು..ಸಿಕ್ಕರು ಅವರ ಮಗನಿಗೆ ಮದುವೆಯಾಗಿ ೭-೮ ತಿಂಗಳಾಗಿತ್ತು ..ನನ್ನಮ್ಮ ಕೇಳಿದ್ಲು ಏನ್ರಿ ವನಜಮ್ಮ (ಹೆಸರು ಅದೇ ಆಗ್ಬೇಕು ಅಂತೇನಿಲ್ಲ..ವಿಷಯದ ಕಡೆ ಗಮನ..ಓಕೆ..) ೩-೪ ವರ್ಷ ನೋಡಿ-ನೋಡಿ ಒಳ್ಳೆ ದಂತದ ಬೊಂಬೆ ಅಂಥಾವಳನ್ನ ಮದ್ವೆ ಮಾಡಿದ್ದೀರಿ ನಿಮ್ಮ ಮಗನಿಗೆ...ನನ್ನಮ್ಮನ ಮಾತನ್ನು ಅರ್ಧಕ್ಕೆ ತುಂಡರಿಸಿ ವನಜಮ್ಮ... ಬಿಡ್ರಿ..ಬಿಡ್ರಿ...ರೂಪ ತಗೊಂಡು ನೆಕ್ಕೋಕಾಗ್ತದಾ...ಎಂದು ಬಿಡೋದೇ..?? ಯಾಕೆ..ಮರೀಚಿಕೆ ಮರೆಯಾಯ್ತೇನೋ..ಅಂತ ನಮಗನ್ನಿಸಿತು...ಚನ್ನಾಗಿದೆ ನಿರೂಪಣೆ...

  ReplyDelete
 7. ವಿನಾಯಕ ಸರ್..ವಿಶ್ಲೇಶಣೆ ಚನ್ನಾಗಿ ಮಾಡಿದ್ದೀರಿ..


  ನನಗೆ ಗುಣಕ್ಕಿಂತ ರೂಪ ಮುಖ್ಯ,.. ಗುಣ ಬದಲು ಮಾಡಿಕೊಳ್ಳಬಹುದು.. ರೂಪವನ್ನಲ್ಲ..

  ಇಂತಿ ನಿಮ್ಮ ಪ್ರೀತಿಯ,

  ಶಿವಶಂಕರ ವಿಷ್ಣು ಯಳವತ್ತಿ
  http://shivagadag.blogspot.com

  ReplyDelete
 8. ರೂಪ ಮುಖ್ಯವಲ್ಲ ಗುಣವೇ ಮುಖ್ಯ ಎಂದು ನಂಬಿ ಬದುಕೋದು ಬರೀ ಗೊಡ್ಡು ಆದರ್ಶವೇ..??? ನಿಮ್ಮ ಬರಹ ಚಿಂತೆಗೆ ದೂಡಿದೆ...!!
  ಆದರೆ ನನ್ನ ನಂಬಿಕೆಗೆ ಸಧ್ಯ ತಿದ್ದುಪಡಿ ಮಾಡಿಕೊಳ್ಳಲು ನಾನು ತಯಾರಿಲ್ಲ.... ನೀವು ಕೊನೆಯಲ್ಲಿ ಹೇಳಿದಂತೆ ಸುಂದರ ಮಾವಿನ ಹಣ್ಣಿನ ಒಳಗಡೆ ಹುಳವಿರುವಂತೆ ಸುಂದರ ವ್ಯಕ್ತಿಯು ಹೃದಯ ಶೂನ್ಯನಾಗಿರಬಹುದು... ನನ್ನ ಪ್ರಕಾರ ಹೀಗೆ ಹೇಳಿದರೆ ಸರಿಯೇನೋ... ಬಾಹ್ಯ ಸೌಂದರ್ಯ ಆ ವ್ಯಕ್ತಿಯೊಡನೆ ನಿಮ್ಮ ಸಂಬಂಧ ಕ್ಷಣಿಕವಾಗಿದ್ದಲ್ಲಿ ಮಾತ್ರ ಮಹತ್ವದ್ದಾಗುತ್ತದೆ.. ಅದೇ ಒಬ್ಬ ವ್ಯಕ್ತಿಯೊಡನೆ ದೀರ್ಘ ಕಾಲ ನೀವು ಬಾಳಿ ಬದುಕಬೇಕೆಂದರೆ ಬಾಹ್ಯ ಸೌಂದರ್ಯ ನಗಣ್ಯ... ಏನಂತೀರಿ...??

  ReplyDelete
 9. ತುಂಬಾ ಚೆನ್ನಾಗಿ ಸರಳ ಮಾತಿನಲ್ಲಿ ಸುಂದರ ಸತ್ಯ ಹೇಳಿದ್ದಿರಿ
  ನಿಮ್ಮ ಶೈಲಿ ಇಷ್ಟವಾಯಿತು

  ReplyDelete
 10. ಬ್ಯೂಟಿ ಪಾರ್ಲರ್ ಗೆ ಹೋಗಲ್ಲ ಅಂತ ಹೇಳೋಕ್ಕಾದ್ರೂ ಕಮೆಂಟ ಬರೀಬೇಕಲ್ಲ ಮಾರಾಯ! ಭಾಷೆ ತುಂಬ ಸರಳ ಆದ್ರೂ ಪರಿಣಾಮಕಾರಿ. ಯಾವಾಗಲೂ ನೆನಪಿರ್ತು; ನಿಮ್ಮೂರ್ನ 'ಮೋತಿ ಗುಡ್ಡ'ದ ಹಾಗೆ!

  ReplyDelete
 11. Nice blog .well written..... thank u........

  ReplyDelete
 12. I think it is not well justified.. :)'m i right?

  ReplyDelete